2012 ರಲ್ಲಿ ನಮ್ಮ ಕುಟುಂಬವು ಕಠಿಣ ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿತ್ತು, ಮತ್ತು ನನ್ನ ಕುಟುಂಬದ ಉಳಿವಿಗಾಗಿ ಕೆಲವೊಂದು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಯಿತು. ಆ ಸಮಯದಲ್ಲಿಯೇ ನನಗೆ ಮುತ್ತೂಟ್ ಬ್ಲೂನ ಪರಿಚಯವಾಯಿತು. ನನಗೆ ಅಲ್ಲಿನ ಸಿಬ್ಬಂದಿಯು ನನ್ನ ಚಿನ್ನದ ಮೇಲೆ ಸಾಲವನ್ನು ಪಡೆಯಲು ನೆರವಾದರು, ಹಾಗು ಇದರಿಂದ ಬಂಡ ಹಣದಿಂದ ನಾನು ನನ್ನ ಸೀರೆ ವ್ಯಾಪಾರವನ್ನು ಪ್ರಾರಂಭಿಸಿದೆ. ನಂತರದ ದಿನಗಳಲ್ಲಿ ನನ್ನ ಅದೇ ವ್ಯವಹಾರದ ಪ್ರಗತಿಯ ಆಧ್ರದ ಮೇಲೆ ನನಗೆ SME ಸಾಲವನ್ನು ನೀಡಲಾಯಿತು ಹಾಗು ಇದರ ಸಹಾಯದಿಂದ ಅಭಿವೃದ್ಧಿಯು ಏರುತ್ತಾ ಸಾಗಿತು. ನನಗೆ ಮತ್ತು ನನ್ನ ಪ್ರೀತಿಪಾತ್ರರಿಗೆ ಸಂತೋಷವನ್ನು ತಂದಿದ್ದಕ್ಕೆ ಮುತ್ತೂಟ್ ಬ್ಲೂಗೆ ನಾನು ಎಂದಿಗೂ ಆಭಾರಿಯಾಗಿದ್ದೇನೆ. ಇನ್ನೂ ಅನೇಕ ಜೀವನವನ್ನು ಬದಲಾಯಿಸಲು ಮುತ್ತೂಟ್ ಬ್ಲೂರವರಿಗೆ ಆಲ್ ದಿ ಬೆಸ್ಟ್
ನಾನು ಕಳೆದ ಎರಡು ಮೂರು ವರ್ಷಗಳಿಂದ ಮುತ್ತೂಟ್ ಬ್ಲೂನ ಗ್ರಾಹಕನಾಗಿದ್ದೇನೆ. ನಾನು ಚಿನ್ನದ ಸಾಲವನ್ನು ಪಡೆದಿದ್ದು ಚಿನ್ನ ಖರೀದಿಸಲು ಇಎಂಐ ಸೌಲಭ್ಯವನ್ನು ಕೂಡ ಬಳಸಿಕೊಂಡಿದ್ದೇನೆ. ನನ್ನಂತವರಿಗೆ ಸುಲಭ ಆಯ್ಕೆಗಳ ಮೂಲಕ ಚಿನ್ನವನ್ನು ಒದಗಿಸುವುದು ನಿಜಕ್ಕೂ ಶ್ಲಾಘನೀಯವಾಗಿದೆ. ಇವಲ್ಲದೆ ನಾನು ಮುತ್ತೂಟ್ ನಿಂದ ಆರೋಗ್ಯ ವಿಮೆಯನ್ನು ಕೂಡ ಹೊಂದಿದ್ದೇನೆ. ಶಾಖಾ ಸಿಬ್ಬಂದಿ ಮತ್ತು ವ್ಯವಸ್ಥಾಪಕರು ನನ್ನಲ್ಲಿ ವಿಶ್ವಾಸವನ್ನು ಹೊಂದಿದ್ದು ಅದಕ್ಕಾಗಿ ನಾನು ಪ್ರತಿ ಬಾರಿಯೂ ಇಲ್ಲಿಗೆ ಬರುತ್ತೇನೆ.
ನಮಸ್ಕಾರ! ನಾನು ಚಿರುಮಾಮಿಲ್ಲಾ ಶೋಭಾ. ನಾನು ಬಿ ಏನ್ ರೆಡ್ಡಿ ಮುತ್ತೂಟ್ ಬ್ಲೂ ಶಾಖೆಯ ಸಮೀಪದಲ್ಲಿರುವ ರಸ್ತೆ ಸಂಖ್ಯೆ 10, ತ್ರಿಮುಲನಗರ, ಹೈದರಾಬಾದ್ನಲ್ಲಿ ವಾಸಿಸುತ್ತಿದ್ದೇನೆ. 2015 ರಲ್ಲಿ, ನನ್ನ ಸ್ವಂತ ಮನೆಯನ್ನು ಸ್ವತಂತ್ರವಾಗಿ ನಿರ್ಮಿಸಲು ಭೂಮಿಯನ್ನು ಖರೀದಿಸಲು ಯೋಜಿಸಿದೆ. ಆದರೆ ಭೂ ನೋಂದಣಿ ಸಮಯದಲ್ಲಿ ನನಗೆ ಹೆಚ್ಚುವರಿ ರೂ. 2 ಲಕ್ಷ ರೂ. ಗಳ ಅಗತ್ಯವಿತ್ತು. ಆಗ ಕೂಡಲೇ ನಾನು ಮುತ್ತೂಟ್ ಬ್ಲೂ ಶಾಖೆಗೆ ಭೇಟಿ ನೀಡಿ ಚಿನ್ನದ ಸಾಲವನ್ನುಕೇವಲ 15 ನಿಮಿಷಗಳಲ್ಲಿ 2 ಲಕ್ಷ ರೂ. ಗೆ ಪಡೆದು ಈಗ ನಾನು ನನ್ನ ಸ್ವಂತ ಮನೆಯಲ್ಲಿದ್ದೇನೆ! ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವ ಎರಡನೆಯ ಉದಾಹರಣೆಯೆಂದರೆ ಅದು ನನ್ನ ಮಗನ UPSC-IRS ತರಬೇತಿ ಕೇಂದ್ರದ ಫೀಸ್ ನ ವಿಚಾರವಾಗಿ . ಆ ಸಮಯದಲ್ಲಿ, ಕೋಚಿಂಗ್ ಶುಲ್ಕವನ್ನು ಪಾವತಿಸಲು ನನಗೆ ತುರ್ತು ಹಣದ ಅಗತ್ಯವಿತ್ತು. ತಕ್ಷಣ ನಾನು ಮುತ್ತೂಟ್ ಗೆ ಧಾವಿಸಿ ಅವರ ಚಿನ್ನದ ಸಾಲದ ಸೌಲಭ್ಯವನ್ನು ಪಡೆದುಕೊಂಡೆ. ಈ ಹಿಂದೆ, ನಾನು ಹಲವಾರು ಸಂಸ್ಥೆಗಳಿಗೆ ಸಾಲಕ್ಕಾಗಿ ಹೋಗಿದ್ದೆ, ಆದರೆ ಮುತ್ತೂಟ್ ಬ್ಲೂ ಚಿನ್ನದ ಸಾಲ ಯೋಜನೆಯು ಎಲ್ಲದಕ್ಕಿಂತ ತುಂಬಾ ಪ್ರಯೋಜನಕಾರಿ ಮತ್ತು ಸಹಾಯಕವಾಗಿದೆ ಎಂಬುದನ್ನು ನಾನು ಮನಗಂಡಿದ್ದೇನೆ. ಅಲ್ಲದೆ ಇಲ್ಲಿನ ಶಾಖೆಯ ಸಿಬ್ಬಂದಿಗಳು ಕೂಡ ಬಹಳ ಸಹಕಾರಿಯಾಗಿದ್ದು ನಮಗೆ ಬೆಂಬಲ ನೀಡುತ್ತಾರೆ. ಮುತ್ತೂಟ್ ಬ್ಲೂನಿಂದ ನಾನು ಪಡೆದ ಪ್ರತಿಯೊಂದು ಪೈಸೆಯೂ ಕೂಡ ಜೀವನದಲ್ಲಿ ನನ್ನ ಬೆಳವಣಿಗೆಗೆ ಕಾರಣವಾಗಿದೆ. ಮುತ್ತೂಟ್ ಬ್ಲೂ ಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸ ಬಯಸುತ್ತೇನೆ
ನಮಸ್ಕಾರ ನನ್ನ ಹೆಸರು ಪಾರ್ವತಿ. ನಾನು ಮನೆಯಿಂದ ಮನೆಗೆ ತೆಂಗಿನ ಎಣ್ಣೆಯನ್ನು ಮಾರಾಟ ಮಾಡುವ ವ್ಯವಹಾರದಲ್ಲಿದ್ದೇನೆ. ನಾನು ವ್ಯವಹಾರವನ್ನು ಪ್ರಾರಂಭಿಸಿದಾಗ, ದೊಡ್ಡ ಹೂಡಿಕೆಯ ಅಗತ್ಯವಿತ್ತು, ಆದರೆ ಸಾಲವನ್ನು ಒದಗಿಸುವ ಬ್ಯಾಂಕುಗಳು,ಗಿರವಿ ಅಂಗಡಿಗಳು ಸೇರಿದಂತೆ ಇತರೆ ಸಂಸ್ಥೆಗಳು ಹೆಚ್ಚಿನ ಬಡ್ಡಿದರಗಳನ್ನು ವಿಧಿಸುತ್ತಿದ್ದ ಕಾರಣದಿಂದ ನಾನು ಸಾಲವನ್ನು ಪಡೆಯಲು ಸಾಧ್ಯವಾಗಲಿಲ್ಲ. ಈ ಸಮಯದಲ್ಲಿ, ಮುತ್ತೂಟ್ ಬ್ಲೂ ರವರು ನನ್ನನ್ನು ಸಂಪರ್ಕಿಸಿದರು ಮತ್ತು ಅವರು ನನ್ನ ಅಗತ್ಯಗಳಿಗೆ ಅನುಸಾರ ಸೂಕ್ತವಾದ ಉತ್ಪನ್ನಗಳನ್ನು ಒದಗಿಸುವುದರೊಡನೆ ನನ್ನ ವ್ಯವಹಾರವನ್ನು ಬೆಳೆಸಲು ಸಹಾಯ ಮಾಡಿದರು. ನನ್ನ ವ್ಯವಹಾರ ಅಭಿವೃದ್ಧಿಗಾಗಿ ನಾನು ಕಳೆದ 4 ವರ್ಷಗಳಿಂದ ಮುತ್ತೂಟ್ ಬ್ಲೂ ಚಿನ್ನದ ಸಾಲದ ಸೌಲಭ್ಯಗಳನ್ನು ಪಡೆಯುತ್ತಾ ಬಂದಿದ್ದೇನೆ. ಈ ಸಾಲಗಳು ನನಗೆ ತುಂಬಾ ಉಪಯುಕ್ತವಾಗಿವೆ. ಇವಲ್ಲದೆ ನಾನು ಇತರ ಹತ್ತು ಜನರನ್ನು ಮುತ್ತೂಟ್ ಬ್ಲೂ ನಿಂದ ಸಾಲ ತೆಗೆದುಕೊಳ್ಳಲು ಪ್ರೇರೇಪಿಸಿದ್ದೇನೆ. ಮುತ್ತೂಟ್ ಬ್ಲೂ ನನ್ನ ಜೀವನಕ್ಕೆ ಸಮೃದ್ಧಿಯನ್ನು ತಂದಿದೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತದೆ
ಉನ್ನತ ಗುಣಮಟ್ಟದ ಅಭ್ಯಾಸಗಳು, ಒಟ್ಟು ಗ್ರಾಹಕರ ತೃಪ್ತಿ ಮತ್ತು ಸ್ಥಿರವಾದ ಬೆಳವಣಿಗೆ, ವ್ಯವಹಾರ ಕ್ಷೇತ್ರದಲ್ಲಿ ದಶಕಗಳವರೆಗೆ ವ್ಯಾಪಿಸಿರುವ ಖ್ಯಾತಿಯನ್ನು ಹೊಂದಿರುವ ಮುತ್ತೂಟ್ ಪಪ್ಪಚನ್ ಗ್ರೂಪ್, ದೇವರು ನೀಡಿದ ನಂಬಿಕೆ, ಸತ್ಯ, ಪಾರದರ್ಶಕತೆ ಮತ್ತು ಸಂಪ್ರದಾಯ ಹಾಗು ದೇವರ ಅನುಗ್ರಹದಿಂದ ಇಂದು ಉನ್ನತ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾಗಿದೆ.
ಭಾರತದಾದ್ಯಂತ 4,200 ಕ್ಕೂ ಹೆಚ್ಚು ಶಾಖೆಗಳು
133+ ವರ್ಷಗಳ ಪರಂಪರೆ
ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿರುವ 24,000 ಕ್ಕೂ ಹೆಚ್ಚು ಉದ್ಯೋಗಿಗಳು
ದಿನಕ್ಕೆ 1,00,000 ಕ್ಕೂ ಹೆಚ್ಚು ಗ್ರಾಹಕರ ಭೇಟಿ.